Tuesday 31 May 2011







"ಅಮ್ಮ - ಪರಬ್ರಹ್ಮ!!"

ಬ್ರಹ್ಮ , ಈ ಸೃಷ್ಟಿಯ ಅಮ್ಮ
ಅಮ್ಮ ಹಡೆದಾಗ ಬ್ರಹ್ಮ
ಆ ವಿಧಾತನ ಕರುಣೆಯೇ ಜನ್ಮ
ಈ ಬ್ರಹ್ಮಾಂಡವೆ ಅಮ್ಮ
ಅಮ್ಮನಿಲ್ಲದ ಜನ್ಮ !?
ಜನಿಸುವನೆ ಸೃಷ್ಟಿಯ ಬ್ರಹ್ಮ !
ಜನ್ಮ ಕಾರಣವೇ ಅಮ್ಮ ....!

ಅಮ್ಮ ಎಂದರೆ ಕಲ್ಪಿತ ಪದವಲ್ಲವೋ
ಅಮ್ಮ ಅಂದರೆ ನಶ್ವರ ದೇಹವಲ್ಲವೋ
ಅಮ್ಮ ಎಂದರೆ ಬರಿ ಪ್ರೀತಿ ಅಲ್ಲವೋ
ಅಮ್ಮ ಅಂದರೆ ತುಂಬಿದ ಕರುಣೆ ಅಲ್ಲವೋ
ಅನಂತ ಭಾವನೆಗಳ, ಒಲವಿನ
ದೇವತಾರೂಪದ ಆತ್ಮವೇ ಅಮ್ಮ ....!

- ಶೂಜ್ಞ

^ಅಮ್ಮ ! - ^^ಗುಮ್ಮ !?




^ಅಮ್ಮ ! - ^^ಗುಮ್ಮ !?

ಹರೆಯ ಆರಸಿ ಜಗಕೆ ಹೆದರಿ
ಅಂದು ಎಸೆದಳು ನೀರಿಗೆ
ಇಂದು ಎಸೆಯುತ್ತಿರುವಳು ಕಸದ ತೊಟ್ಟಿಗೆ
ಅಮ್ಮ ಎನ್ನಲು, ಅಂಜುತಿದೆ ಮನ !
ಮತ್ತಿನ್ನೆಲ್ಲಿ ಎಸೆಯುವಳೋ
ಹಸಿಮನಸ್ಸಿನ ನನ್ನ ....

ಯಾವ ಕರ್ಮದ ಫಲವೋ !?
ಹಸಿಕಾಮದ ರಸಪೀಡೆಯ
ಕ್ಷಣಮಾತ್ರದ ಪಾಪಿಗಳು ನಾವು,
ತಿಪ್ಪೆಯ ಹುಳುಗಳನ್ತಾಗಿರುವೆವು!
ಅಮ್ಮ ಎನ್ನುವ ಕೂಗು
ಅರ್ಧಕ್ಕೆ ನಿಂತು ಅರ್ಧಿಸುತಿದೆ
ಹಾಲುಗಲ್ಲದ ದೇಹದಲಿ
ಈ ಕೂಗು ಶಾಶ್ವತವಾಗಿ
ನಿಲ್ಲಿಸಬಾರೆಯ ಅಮ್ಮ .....

ಉಳಿಸಿದರೆ ನಾಯಿಗಳು
ನಾವು ರಸ್ತೆಬದಿಯ ಜೀವಿಗಳು
ಬೆಳೆಸಿದರೆ, ಬಿಕ್ಷೆಯ ಮಾಲಿಗಳು
ಬೆಳೆದರೆ, ಬೆಂಕಿಯ ಹೂಗಳು
ಕಂಡರೆ ಅಸಹ್ಯ ಪಡುವ
ಈ ಜಗದ ದಾಯಾಧಿಗಳು ....

ಬೇಕೇ ಈ ಕರ್ಮ !?
ನಾವು ಎಂದಾದರು
ಬೇಡಿದ್ದವೆ ಈ ಜನ್ಮ !?
ಯಾಕೆ ಕೊಟ್ಟಿರಿ ಈ ಜನ್ಮ !?
ಕಾಣದ ನಿನ್ನ, ಕರೆಯಬೇಕೆ ಅಮ್ಮ !?
ನೀ ಅಮ್ಮ ಅಲ್ಲ ಗುಮ್ಮ
ಆದರು ಕರೆಯುವವೆವು
ಪ್ರತಿಕ್ಷಣ ಅಮ್ಮ .....

ಅಮ್ಮ ಅಂದರೆ ಅನಂತವಂತೆ
ಅಮ್ಮ ಎನ್ನಲು ಆನಂದವಂತೆ
ಅಮ್ಮ ಇದ್ದರೆ ಆನೆ ಬಲವಂತೆ
ಆದರೆ ನಮಗೆ ಅಮ್ಮ ಇಲ್ಲವಂತೆ
ನಾವು ಈ ಜಗದ ಬಂತೆ
ನಮಗೇಕೆ ಈ ಸಂತೆ ......

- ಶೂಜ್ಞ